ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೂ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿ, 112 ಸ್ಕೋರಿಗೆ ಆಲೌಟ್ ಆಯಿತು, ಅಲ್ಪಮೊತ್ತವನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ 3 ವಿಕೆಟ್ ಕಳೆದುಕೊಂಡು 20.4 ಓವರ್ ಗಳಲ್ಲಿ ಗುರಿ ಮುಟ್ಟಿತು. ಈ ಗೆಲುವಿನ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 1-0 ಮುನ್ನಡೆ ಪಡೆದುಕೊಂಡಿದೆ. ಶ್ರೀಲಂಕಾ ಪರ ಉಪುಲ್ ತರಂಗಾ 49ರನ್, ಏಂಜೆಲೋ ಮ್ಯಾಥ್ಯೂಸ್ ಅಜೇಯ 25, ನಿರೋಷನ್ ಡಿಕ್ವೆಲ್ಲಾ ಅಜೇಯ 26ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. 0 ರನ್ ಸ್ಕೋರ್ ಮಾಡುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಮತ್ತೆ ಚೇತರಿಕೆ ಕಾಣಲಿಲ್ಲ. ಎಂಎಸ್ ಧೋನಿ ಅವರು 87 ಎಸೆತಗಳಲ್ಲಿ 65 ರನ್ (10 ಬೌಂಡರಿ, 2 ಸಿಕ್ಸರ್), ಕುಲದೀಪ್ ಯಾದವ್ 19ರನ್ (4 ಬೌಂಡರಿ) ಹಾಗೂ ಹಾರ್ದಿಕ್ ಪಾಂಡ್ಯ 10ರನ್ ಗಳಿಸಿದ್ದು ಬಿಟ್ಟರೆ, ಮುಂತಾದವರು ಎರಡಂಕಿ ದಾಟಲಿಲ್ಲ. 38.2 ಓವರ್ ಗಳಲ್ಲಿ ಭಾರತ 112 ಸ್ಕೋರಿಗೆ ಸರ್ವ ಪತನ ಕಂಡಿತು <br /> In the absence of Virat Kohli, team India suffered a huge loss against sri lanka and MS Dhoni was the only one to stay for a while on the crease .